ಹಿಂದಿನ ವಾರ ಭಾರತ ಸರ್ಕಾರ, 2011ರಿಂದ 2013 ರ ನಡುವೆ ನಡೆಸಿದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯ (SECC 2011) ಭಾಗಶಃ ವರದಿ ಬಿಡುಗಡೆ ಗೊಳಿಸಿದೆ. ಭಾಗಶಃ ಏಕೆಂದರೆ ಜಾತಿ ಗಣತಿಯ ವರದಿಯನ್ನು ರಾಜಕೀಯ ಕಾರಣಗಳಿಂದ ಬಿಡುಗಡೆ ಮಾಡಿಲ್ಲ ಹಾಗೂ ನಗರ ಪ್ರದೇಶಗಳಿಗೆ ಸಂಬಂದ ಪಟ್ಟ ಮಾಹಿತಿಯನ್ನು ಈ ವರದಿ ಒಳಗೊಂಡಿಲ್ಲ. ಹಾಗಾಗಿ ಬಿಡುಗಡೆಗೊಳಿಸಿದ ವರದಿ ಸಧ್ಯಕ್ಕೆ ಗ್ರಾಮೀಣ ಭಾರತದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಂಕಿ ಸಂಖ್ಯೆ ಗಳನ್ನಷ್ಟೇ ಒಳಗೊಂಡಿದೆ.
ಏನಿದು?
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಲ್ಲಿ "ಬಡತನ ರೇಖೆ" ಗಿಂತ ಕೆಳಮಟ್ಟದಲ್ಲಿರುವ ಕುಟುಂಬಗಳನ್ನು ನಿಖರವಾಗಿ ಗುರುತಿಸುವ ಮುಖ್ಯ ಉದ್ದೇಶದಿಂದ ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ 2011ರಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆ ಯೋಜನೆ (SECC 2011) ಕೈಗೆತ್ತಿಕೊಂಡಿತು. ಈ ಸಮಗ್ರ ಸಮೀಕ್ಷೆಯು ಕೆಳಕಂಡ ಮೂರು ಗುರಿಗಳನ್ನು ಹೊಂದಿತ್ತು.
- ಕುಟುಂಬಗಳನ್ನು ಅವುಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ವರ್ಗೀಕರಣ (Rank) ಮಾಡುವುದು. ನಂತರ ಈ ಆಧಾರದ ಮೇಲೆ ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ವಾಸಿಸುತ್ತಿರುವ ಕುಟುಂಬಗಳ ಪಟ್ಟಿ ತಯಾರಿಸಬಹುದು.
- ಅಧಿಕೃತ ಜಾತಿವಾರು ಜನಸಂಖ್ಯೆಯ ಮಾಹಿತಿ ದೊರಕುವಂತೆ ಮಾಡುವುದು.
- ವಿವಿಧ ಜಾತಿಗಳ ಸಾಮಾಜಿಕ, ಅರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯ ವಾಗುವಂತೆ ಮಾಡುವುದು
ಕುಟುಂಬಗಳ ವರ್ಗೀಕರಣ ಹೇಗೆ?
ಗ್ರಾಮೀಣ ಪ್ರದೇಶದಲ್ಲಿರುವ ಕುಟುಂಬಗಳು ಬಡತನವನ್ನು ತೋರಿಸುತ್ತಿವೆಯೇ ಎಂದು ತೀರ್ಮಾನಿಸಲು ಮೂರು ಹಂತದ ನಿರ್ಣಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಅವೆಂದರೆ- ಖಂಡಿತ ಬಡವರಲ್ಲ (Automatic exclusion)
- ಬಡವರಿರಬಹುದು (Tested for deprivation)
- ಖಂಡಿತ ಬಡವರು (Automatic Inclusion)
ಖಂಡಿತ ಬಡವರಲ್ಲ
|
ಬಡವರಿರಬಹುದು
|
ಖಂಡಿತ ಬಡವರು
|
ಕುಟುಂಬವು ಕೆಳಗಿನ ಯಾವುದಾದರೂ
ಒಂದನ್ನು ಹೊಂದಿದ್ದಲ್ಲಿ
|
ಕುಟುಂಬವು ಕೆಳಗಿನ 7 'ಬಡತನ ಸೂಚಕ' ಗಳಲ್ಲಿ ಹೆಚ್ಚು
ಸೂಚಕಗಳನ್ನು ಹೊಂದಿದಂತೆ
"ಖಂಡಿತ ಬಡವರು"
ಪಟ್ಟಿಯಲ್ಲಿ ಒಳಗೊಳ್ಳಲು
ಆದ್ಯತೆ ಹೆಚ್ಚು.
|
ಕುಟುಂಬವು ಕೆಳಗಿನ ಯಾವುದಾದರೂ
ಒಂದನ್ನು ಹೊಂದಿದ್ದಲ್ಲಿ
|
1.
2/3/4 ಚಕ್ರದ ವಾಹನಗಳು
/ಮೀನುಗಾರಿಕಾ ದೋಣಿ
2.
3/4 ಚಕ್ರದ ಯಾಂತ್ರಿಕ
ಕೃಷಿ ಉಪಕರಣ
3.
ರೂ 50,000 ಅಥವಾ
ಅದಕ್ಕೂ ಮೇಲ್ಪಟ್ಟು
ಸಾಲ ಮಿತಿ
ಹೊಂದಿರುವ ಕಿಸಾನ್
ಕ್ರೆಡಿಟ್ ಕಾರ್ಡ್
4.
ಕುಟುಂಬದ ಯಾವುದೇ
ಸದಸ್ಯ ಸರ್ಕಾರಿ
ನೌಕರನಾಗಿದ್ದಲ್ಲಿ
5.
ಭಾರತ ಸರ್ಕಾರಕ್ಕೆ
ನೊಂದಾಯಿತ ಕೃಷ್ಯೇತರ
ಉದ್ಯಮ
6.
ರೂ. 10,000 ಕ್ಕೂ
ಮೇಲ್ಪಟ್ಟು ಸಂಪಾದಿಸುವ
ಕುಟುಂಬದ ಸದಸ್ಯ
7.
ಆದಾಯ ತೆರಿಗೆ
ಪಾವತಿಸುತ್ತಿದ್ದಲ್ಲಿ
8. ವೃತ್ತಿಪರ ತೆರಿಗೆ ಪಾವತಿಸುತ್ತಿದ್ದಲ್ಲಿ
9.
ಪಕ್ಕಾ ಗೋಡೆ
ಮತ್ತು ಛಾವಣಿ
ಹೊಂದಿರುವ ಮೂರು
ಅಥವಾ ಅಧಿಕ
ಕೋಣೆಗಳು
10.
ಸ್ವಂತ ರೆಫ಼್ರಿಜಿರೇಟರ್
11.
ಸ್ವಂತ ಸ್ಥಿರ
ದೂರವಾಣಿ
12.
ಸ್ವಂತ 2.5 ಎಕರೆ
ನೀರಾವರಿ ಭೂಮಿ,
ಕನಿಷ್ಟ ಒಂದು
ನೀರಾವರಿ ಉಪಕರಣದೊಂದಿಗೆ
13.
ಎರಡು ಅಥವಾ
ಜಾಸ್ತಿ ಬೆಳೆಗಳಿಗೆ,
5 ಅಥವಾ ಅಧಿಕ ಎಕರೆ
ನೀರಾವರಿ ಭೂಮಿ
14. ಸ್ವಂತ
ಕನಿಷ್ಟ 7.5 ಎಕರೆ
ಅಥವಾ ಜಾಸ್ತಿ ಭೂಮಿ,
ಕನಿಷ್ಟ ಒಂದು
ನೀರಾವರಿ ಉಪಕರಣದೊಂದಿಗೆ
|
1.
ಕಚ್ಚಾ ಗೋಡೆ
ಹಾಗೂ ಛಾವಣಿ
ಹೊಂದಿರುವ ಒಂದೇ
ಕೋಣೆಯಲ್ಲಿ ವಾಸಿಸುವ
ಕುಟುಂಬ
2.
16 ರಿಂದ 59 ವಯಸ್ಸಿನ
ಸದಸ್ಯ ಕುಟುಂಬದಲ್ಲಿ
ಇಲ್ಲದಿದ್ದಲ್ಲಿ
3. 16
ರಿಂದ 59 ವಯಸ್ಸಿನ
ಯಾವುದೇ ಪುರುಷ ಸದಸ್ಯ
ಕುಟುಂಬದಲ್ಲಿ ಇಲ್ಲದೇ,
ಮಹಿಳೆ ಯಜಮಾನಿಯಾಗಿರುವ
ಕುಟುಂಬ
4.
ಯಾವುದೇ ಸಬಲ
ಸದಸ್ಯನಿಲ್ಲದೇ ಅಂಗವಿಕಲ
ಸದಸ್ಯರಿರುವ ಕುಟುಂಬ
5.
SC/ST ಸೇರಿರುವ ಕುಟುಂಬ
6.
25 ವರ್ಷಕ್ಕೆ ಮೇಲ್ಪಟ್ಟ
ಯಾವುದೇ ಅಕ್ಷರಸ್ಥ
ಸದಸ್ಯರಿಲ್ಲದ ಕುಟುಂಬ
7.
ತಮ್ಮ ಹೆಚ್ಚಿನ
ಆದಾಯವನ್ನು ದೈಹಿಕ
ಕೂಲಿ ಕಾರ್ಮಿಕ
ದುಡಿಮೆಯಿಂದ ಗಳಿಸುವ ಭೂ
ರಹಿತ ಕುಟುಂಬಗಳು
|
1.
ಆಶ್ರಯವಿಲ್ಲದ ಕುಟುಂಬ
2.
ನಿರ್ಗತಿಕರು/ ಭಿಕ್ಷುಕರು
3.
ಮಾನ್ಯುಯಲ್ ಸ್ಕಾವೆಂಜೆರ್
4.
ಪ್ರಾಚೀನ ಬುಡಕಟ್ಟು ಪಂಗಡಗಳು
5.
ಕಾನೂನಿನ ರೀತ್ಯಾ
ಬಿಡಿಸಿದ ಬಂಧಿತ
ಕಾರ್ಮಿಕರು
|
ಈ ಸೂಚಕಗಳನ್ನು ಗಮನಿಸಿದಾಗ ಸ್ವಂತ ರೆಫ್ರಿಜಿರೇಟರ್ ಹೊಂದಿರುವುದು, ಕುಟುಂಬಗಳನ್ನು "ಬಡವರಲ್ಲ"ಎಂದು ನಿಗಧಿ ಪಡಿಸುವ ಒಂದು ಸೂಚಕವನ್ನಾಗಿ ಅಳವಡಿಸಿಕೊಂಡಿರುವುದು ಯಾಕೆ ಎಂದು ಅರ್ಥವಾಗುತ್ತಿಲ್ಲ. ರೆಫ್ರಿಜಿರೇಟರ್ ಗಿಂತ ಸ್ವಂತ "ಟಿವಿ" ಹೊಂದಿರುವುದನ್ನು ಒಂದು ಸೂಚಕವಾಗಿ ಪರಿಗಣಿಸಬಹುದಿತ್ತು. ಇದರಿಂದ ಮೀಡಿಯಾ ಮೂಲಕ ಹಳ್ಳಿಗಳಲ್ಲಿನ ಎಷ್ಟು ಕುಟುಂಬಗಳನ್ನು ತಲುಪಬಹುದು ಎಂಬ ಅಂದಜಾದರೂ ಸಿಗುತ್ತಿತ್ತು. ಅಲ್ಲದೆ ಟಿವಿ ನಡೆಸಲು ಪ್ರತಿ ತಿಂಗಳೂ ಹಣ ತೆರಬೇಕಾಗಿ (DTH or Cable) ಬರುವುದರಿಂದ, ರೆಫ್ರಿಜಿರೇಟರ್ ಕ್ಕಿಂತ ಟಿವಿ ಹೊಂದಿರುವುದೇ ಬಡವರಲ್ಲ ಎಂಬುದಕ್ಕೆ ಸರಿಯಾದ ಸೂಚಕ ಎಂದು ನನ್ನ ಅಭಿಪ್ರಾಯ.
ಮೇಲಿನ ಮೂರು ಹಂತಗಳ ಹೊರತಾಗಿ, ನಾಲ್ಕನೆಯ ಇನ್ನೊಂದು ಹಂತವನ್ನು ಗುರುತಿಸಬಹುದು. ಅದೆಂದರೆ ಮೇಲಿನ ಯಾವುದೇ 26 ಸೂಚಕಗಳನ್ನೂ ಪೂರೈಸದೇ ಇರುವ ಕುಟುಂಬಗಳು. 26 ಸೂಚಕಗಳನ್ನು ಸರಿಯಾಗಿ ಗಮನಿಸಿದರೆ ಇಂತಹ ಕುಟುಂಬಗಳು "ಖಂಡಿತ ಬಡವರಲ್ಲ" ಮತ್ತು "ಬಡವರಿರಬಹುದು" ಗುಂಪುಗಳ ನಡುವೆ ಬರುತ್ತವೆ ಎಂದು ಹೇಳಬಹುದು. ಆ ಕಾರಣಕ್ಕಾಗಿ ಇಂತಹ ಕುಟುಂಬಗಳನ್ನು " ಬಡವರಲ್ಲ" ಎಂದು ಕರೆಯಬಹುದು.
ಕೆಳಗಿನ ಟೇಬಲ್ ನಲ್ಲಿ ಮೇಲಿನ ನಾಲ್ಕು ಗುಂಪಿಗೆ ಸೇರಿದ ಕುಟುಂಬಗಳ ಸಂಖ್ಯೆ ನೀಡಿದೆ.
Excluded
|
Considered for deprivation
|
Included
|
||
ಖಂಡಿತ ಬಡವರಲ್ಲ
|
ಬಡವರಲ್ಲ
|
ಬಡವರಿರಬಹುದು
|
ಖಂಡಿತ ಬಡವರು
|
|
ಭಾರತ
|
7,05,71,907
(39.4%)
|
2,00,71,914
(11.2%)
|
8,68,70,785
(48.49%)
|
16,50,153
(0.92%)
|
ಕರ್ನಾಟಕ
|
40,22,726
(50%)
|
11,59,350
(14.4%)
|
28,36,544
(35.24%)
|
30,074
(0.37%)
|
ಕರ್ನಾಟಕದ ಅರ್ಧ ಸಂಖ್ಯೆಯ ಕುಟುಂಬಗಳು ಖಂಡಿತ ಬಡವರಲ್ಲ ಎಂಬುದನ್ನು ನೋಡಿ ಸಮಾಧಾನವಾಗುತ್ತಿದೆ. ರಾಷ್ಟ್ರೀಯ ಸರಾಸರಿಗೆ ಹೋಲಿಸಿದಲ್ಲಿ, ಕರ್ನಾಟಕ ಸ್ವಲ್ಪ ಮಟ್ಟಿಗೆ ಉತ್ತಮ. ಈ ವರದಿಯಲ್ಲಿ ಬಡತನದಲ್ಲಿರುವ ಕುಟುಂಬಗಳ ಸಂಖ್ಯೆಯನ್ನು ನಿಖರವಾಗಿ ನೀಡಿಲ್ಲ. ಆದರೆ ಇನ್ನೂ ಸುಮಾರು 36% ಕುಟುಂಬಗಳು ಬಡತನದಿಂದ ಪಾರಾಗಿಲ್ಲ ಎಂದು ಅಂದಾಜಿಸಬಹುದು. ಕರ್ನಾಟಕ ಸರ್ಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯೂ ಇರುವುದರಿಂದ, ಎರಡೂ ವರದಿಗಳನ್ನು ಪರಿಶೀಲಿಸಿ ಸರಿಯಾದ "ಬಡತನ ರೇಖೆ " ಯನ್ನು ಕರ್ನಾಟಕ ಸರ್ಕಾರ ಅಳವಡಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ ಕುಟುಂಬಗಳನ್ನು ಬಡತನದಿಂದ ಪಾರುಮಾಡಲು ಸಮಗ್ರ ಕಾರ್ಯ ನೀತಿ ನಿರೂಪಿಸಿ, ಅದರ ಪ್ರಯೋಜನಗಳನ್ನು ಅರ್ಹ ಕುಟುಂಬಗಳಿಗೆ ಸಿಗುವಂತೆ ನೋಡಿಕೊಳ್ಳುವುದು ಅವಶ್ಯಕ.
SECC 2011 ವರದಿಯಲ್ಲಿ ಸಿಗುವ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಇನ್ನಿತರ ಪ್ರಮುಖ ಮಾಹಿತಿಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದೇನೆ.
1. ಕುಟುಂಬದ ವಿವರಗಳು
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 17,91,64,759 ಹಾಗೂ ನಗರ ಪ್ರದೇಶಗಳಲ್ಲಿ 6,47,80,538 ಕುಟುಂಬಗಳಿವೆ. ಕರ್ನಾಟಕದಲ್ಲಿರುವ ಒಟ್ಟು 1,31,39,093 ಕುಟುಂಬಗಳ ಪೈಕಿ 80,48,694 ಗ್ರಾಮೀಣ ಪ್ರದೇಶಗಳಲ್ಲಿದ್ದರೆ, ಉಳಿದ 50,90,399 ಕುಟುಂಬಗಳು ನಗರ ಪ್ರದೇಶದಲ್ಲಿ ವಾಸವಾಗಿವೆ. ಕರ್ನಾಟಕ ಸರ್ಕಾರ 2015ರಲ್ಲಿ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆ 1,41,54,632 ಕ್ಕೆ ಏರಿದೆ.
ಗ್ರಾಮೀಣ ಕುಟುಂಬಗಳು
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ಒಂದು ಕುಟುಂಬದಲ್ಲಿ ಸರಾಸರಿ 4.93 ಸದಸ್ಯರಿದ್ದಾರೆ. ಅದೇ ಕರ್ನಾಟಕದಲ್ಲಿ 4.74 ಸದಸ್ಯರಿದ್ದಾರೆ. ಆಂದ್ರ ಪ್ರದೇಶದಲ್ಲಿ ಅತಿ ಕಡಿಮೆ ಅಂದರೆ 3.86 ಸದಸ್ಯರಿದ್ದರೆ, ಉತ್ತರ ಪ್ರದೇಶದ ಒಂದು ಕುಟುಂಬದಲ್ಲಿ ಅತಿ ಹೆಚ್ಚು ಅಂದರೆ ಸರಾಸರಿ 6.26 ಸದಸ್ಯರಿದ್ದಾರೆ.
ಕರ್ನಾಟಕದ 18.57% ಕುಟುಂಬಗಳಲ್ಲಿ ಮಹಿಳೆ ಯಜಮಾನಿಯಾಗಿದ್ದಾಳೆ. ಮಹಿಳೆ ಯಜಮಾನಿಯಾಗಿರುವ ಕುಟುಂಬಗಳು ಲಕ್ಷದ್ವೀಪದಲ್ಲಿ ಅತಿ ಹೆಚ್ಚು - 40.64%, ನಂತರದಲ್ಲಿ ಕೇರಳ - 26.25% ಇವೆ. ಇದರಲ್ಲಿ ಎಷ್ಟು ಭಾಗ, ವಯಸ್ಕ ಪುರುಷ ಇರುವ ಕುಟುಂಬದಲ್ಲಿ ಮಹಿಳೆ ಯಜಮಾನಿಯಾಗಿದ್ದಾಳೆ ಮತ್ತು ವಯಸ್ಕ ಪುರುಷ ಇಲ್ಲದೆ ಇರುವ ಕುಟುಂಬದಲ್ಲಿ ಮಹಿಳೆ ಯಜಮಾನಿಯಗಿದ್ದಾಳೆ ಎನ್ನುವ ವಿವರ ನಿಖರವಾಗಿ ಸಿಗುವುದಿಲ್ಲ.
2. ಶೈಕ್ಷಣಿಕ ವಿವರಗಳು
ಭಾರತದ ಹಳ್ಳಿಗಳಲ್ಲಿ ಒಟ್ಟಾರೆ 35.73% ಜನ ಅನಕ್ಷರಸ್ತರು. ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರ ಸಂಖ್ಯೆ 1,20,41,747 ಅಂದರೆ ಒಟ್ಟು ಜನ ಸಂಖ್ಯೆಯ 31.54% . ಲಕ್ಷದ್ವೀಪ (9.30%) ಹಾಗೂ ಕೇರಳ (11.38%) ಅತಿ ಕಡಿಮೆ ಅನಕ್ಷರಸ್ಥರನ್ನು ಹೊಂದಿದೆ. ಕರ್ನಾಟಕದಲ್ಲಿ ಎಷ್ಟು ಜನ ಯಾವ ಮಟ್ಟದಲ್ಲಿ ಶಿಕ್ಷಣ ಮುಗಿಸಿದ್ದಾರೆ ಎಂದು ಕೆಳಗಿನ ಚಾರ್ಟ್ ನಲ್ಲಿ ನೋಡಬಹುದು.
3. ಮನೆಗಳ ವಿವರ
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ 91.63% ಕುಟುಂಬಗಳು ಸ್ವಂತ ಮನೆ ಹೊಂದಿವೆ. ಆಶ್ಚರ್ಯವೇನಿಲ್ಲ. ಹಳ್ಳಿಗಳಲ್ಲಿ ಸ್ವಂತ ಮನೆ ಹೊಂದಿರುವುದು ಸಾಮಾನ್ಯ .
ಕುಟುಂಬಗಳ ಸ್ವಾಧೀನದಲ್ಲಿರುವ ವಾಸಿಸುವ ಕೋಣೆಗಳು: 65% ಕುಟುಂಬಗಳು 1-2 ಕೋಣೆಗಳಿರುವ ಮನೆಗಳಲ್ಲಿ ವಾಸವಾಗಿವೆ. ಒಂದು ಕುಟುಂಬದಲ್ಲಿ ಸರಾಸರಿ 4.74 ಸದಸ್ಯರಿರುವುದರಿಂದ, ಹೆಚ್ಚಿನ ಕುಟುಂಬಗಳಲ್ಲಿ 1-2 ಕೋಣೆಗಳಲ್ಲಿ 4.74 ಜನರು ವಾಸವಾಗಿದ್ದಾರೆ ಎಂದು ತರ್ಕಿಸಬಹುದು.
ಮನೆಗಳ ಗೋಡೆ ಮತ್ತು ಛಾವಣಿಗಳನ್ನು ನಿರ್ಮಿಸಲು ಉಪಯೋಗಿಸಿದ ಪ್ರಧಾನ ವಸ್ತುವಿನ ಆಧಾರದ ಮೇಲೆ ಕಚ್ಚಾ ಮತ್ತು ಪಕ್ಕಾ ರೀತಿ ಎಂದು ವಿಂಗಡಣೆ ಮಾಡಿದ್ದಾರೆ. ಹೇಗೆ ಮತ್ತು ಅವುಗಳ ಸಂಖ್ಯೆ ಎಷ್ಟಿವೆ? ಮುಂತಾದ ಪ್ರೆಶ್ನೆಗಳಿಗೆ ಉತ್ತರ ಕೆಳಗಿನ ಟೇಬಲ್ ಗಳಲ್ಲಿ ನೋಡಬಹುದು.
ಕರ್ನಾಟಕ : ಕೋಣೆ ಗೋಡೆಯ ಪ್ರಧಾನ ನಿರ್ಮಾಣ ವಸ್ತು
|
|||
ಕಚ್ಚಾ ರೀತಿ – 43.50%
|
ಪಕ್ಕಾ ರೀತಿ – 56.50%
|
||
1. ಹುಲ್ಲು/ಬಿದಿರಿನಿಂದ ನಿರ್ಮಿತ
|
8.6%
|
1. ಗಾರೆ ಮಾಡಿ ಕೂಡಿಟ್ಟ ಕಲ್ಲಿನಿಂದ ನಿರ್ಮಿತ
|
32.2%
|
2. ಪ್ಲಾಸ್ಟಿಕ್ /ಪಾಲಿಥಿನ್ ನಿಂದ ನಿರ್ಮಿತ
|
1.3%
|
2. ಜಿ ಐ /ಲೋಹ /ಆಸ್ಬೆಸ್ಟೊಸ್ ತಗಡಿನಿಂದ ನಿರ್ಮಿತ
|
1.8%
|
3. ಮಣ್ಣು /ಸುಡದ ಇಟ್ಟಿಗೆಯಿಂದ ನಿರ್ಮಿತ
|
57.6%
|
3. ಸುಟ್ಟ ಇಟ್ಟಿಗೆಯಿಂದ ನಿರ್ಮಿತ
|
56.2%
|
4. ಮರ/ಕಟ್ಟಿಗೆಯಿಂದ ನಿರ್ಮಿತ
|
3.1%
|
4. ಕಾಂಕ್ರೀಟ್ ನಿಂದ ನಿರ್ಮಿತ
|
7.6%
|
5. ಗಾರೆ ಮಾಡದೇ ಕೂಡಿಟ್ಟ ಕಲ್ಲಿನಿಂದ ನಿರ್ಮಿತ
|
29.4%
|
5. ಇತರೆ
|
2.3%
|
100%
|
100%
|
ಕರ್ನಾಟಕ : ಕೋಣೆ ಛಾವಣಿಯ ಪ್ರಧಾನ ನಿರ್ಮಾಣ ವಸ್ತು
|
|||
ಕಚ್ಚಾ ರೀತಿ – 21%
|
ಪಕ್ಕಾ ರೀತಿ – 79%
|
||
1. ಹುಲ್ಲು/ಬಿದಿರು/ಮಣ್ಣು/ಮರ
ದಿಂದ ನಿರ್ಮಿತ
|
44%
|
1. ಯಂತ್ರ
ನಿರ್ಮಿತ ಹಂಚುಗಳು
|
44.5%
|
2. ಪ್ಲಾಸ್ಟಿಕ್ /ಪಾಲಿಥಿನ್ ನಿಂದ ನಿರ್ಮಿತ
|
5.3%
|
2. ಸುಟ್ಟ
ಇಟ್ಟಿಗೆ
|
2.4%
|
3. ಕರ ನಿರ್ಮಿತ ಹಂಚುಗಳು
|
50.6%
|
3. ಕಲ್ಲು
|
9.9%
|
4. ಬಳಪ
|
5.6%
|
||
5. ಜಿ ಐ /ಲೋಹ /ಆಸ್ಬೆಸ್ಟೊಸ್ ತಗಡಿನಿಂದ ನಿರ್ಮಿತ
|
17.1%
|
||
6. ಕಾಂಕ್ರೀಟ್ ನಿಂದ ನಿರ್ಮಿತ
|
13.9%
|
||
7. ಇತರೆ
|
6.6%
|
||
100%
|
100%
|
ಇಲ್ಲಿ "ಇತರೆ" ನಿರ್ಮಾಣ ವಸ್ತುಗಳನ್ನು, ಅದು ಗೋಡೆಯಾಗಲಿ ಅಥವಾ ಛಾವಣಿಯಾಗಲಿ, ಪಕ್ಕಾ ರೀತಿಯೆಂದೇ ಪರಿಗಣಿಸಿದ್ದನ್ನು ಗಮನಿಸಬೇಕು. ಕಚ್ಚಾ ಗೋಡೆ ಮನೆಗಳು 43.50% ಮತ್ತು ಕಚ್ಚಾ ಛಾವಣಿ ಮನೆಗಳು 21% ಕುಟುಂಬಗಳು ಹೊಂದಿವೆ. ಹಾಗಾದರೆ ಕರ್ನಾಟಕದಲ್ಲಿ ಒಟ್ಟು ಕಚ್ಚಾ ಮನೆಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆ 11,70,341 ಮತ್ತು ಪಕ್ಕಾ ಮನೆಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆ 32,27,338 ಎಂದು ವರದಿ ತಿಳಿಸುತ್ತದೆ. ಆದರೆ ಪಕ್ಕಾ ಮತ್ತು ಕಚ್ಚಾ ಮನೆಗಳ ಸಂಖ್ಯೆಯನ್ನು ಕೂಡಿಸಿದರೆ ಒಟ್ಟು ಕುಟುಂಬಗಳ ಸಂಖ್ಯೆಯಾದ 80,48,694 ಕ್ಕೆ ಸಮವಾಗಿಲ್ಲ. ವ್ಯತ್ಯಾಸ 31,51,015 ಮನೆಗಳಾಗಿವೆ. ಹೇಗೇ ಕೂಡಿಸಿ, ಕಳೆದರೂ ತಾಳೆಯಾಗುತ್ತಿಲ್ಲ. ಕಚ್ಚಾ ಮತ್ತು ಪಕ್ಕಾ ಮನೆಗಳ ಮಾಹಿತಿ ದೋಷ ಪೂರಿತವಾಗಿದೆ ಎಂದು ನನ್ನ ಅಭಿಪ್ರಾಯ.
(Check here http://www.secc.gov.in/staticReportData?getReportId=C_5#)
(Check here http://www.secc.gov.in/staticReportData?getReportId=C_5#)
4. ಉದ್ಯೋಗ ಮತ್ತು ಆದಾಯ
ಕರ್ನಾಟಕದ ಗ್ರಾಮೀಣ ಭಾಗದಲ್ಲಿ 9.87% ಕುಟುಂಬಗಳು ಮಾತ್ರ ಸ್ಥಿರ ವರಮಾನ ಹೊಂದಿವೆ. ಇಂತಹ ಕುಟುಂಬದ ಒಬ್ಬರಾದರೂ ಸರ್ಕಾರಿ, ಸಾರ್ವಜನಿಕ, ಅಥವಾ ಖಾಸಗಿ ಕ್ಷೇತ್ರ ದಲ್ಲಿ ಉದ್ಯೋಗದಲ್ಲಿದ್ದಾರೆ.
ಆದಾಯ ತೆರಿಗೆ ಪಾವತಿಸುವ ಕರ್ನಾಟಕದ ಕುಟುಂಬಗಳ ಸಂಖ್ಯೆ 7,36,876, ಅಂದರೆ ಒಟ್ಟು ಕುಟುಂಬಗಳ 9.1% ಮಾತ್ರ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ತೆರಿಗೆ ಪಾವತಿಸುವ ಕುಟುಂಬಗಳು 4.4% ಮಾತ್ರ.
ಇನ್ನೊಂದು ಬಹು ವರದಿಯಾದ ಪ್ರಮುಖ ವಿವರವನ್ನು ನೋಡೋಣ. ಅದೆಂದರೆ ಕುಟುಂಬಗಳ ಮಾಸಿಕ ಆದಾಯ. ಭಾರತದಲ್ಲಿ 74.49% ಕುಟುಂಬಗಳಲ್ಲಿ, ಅತಿ ಹೆಚ್ಚು ಸಂಪಾದಿಸುವ ಸದಸ್ಯನ ಮಾಸಿಕ ಆದಾಯ ರೂ. 5000 ಕ್ಕಿಂತಲೂ ಕಡಿಮೆ. ಇನ್ನು 17.18% ಕುಟುಂಬಗಳಲ್ಲಿ ಅತಿ ಹೆಚ್ಚು ಸಂಪಾದಿಸುವ ಸದಸ್ಯನ ಆದಾಯ ರೂ. 5000-10,000 ಮತ್ತು 8.29% ಕುಟುಂಬಗಳಲ್ಲಿ ಮಾತ್ರ ಮಾಸಿಕ ಆದಾಯ ರೂ. 10,000 ಕ್ಕಿಂತ ಅಧಿಕವಾಗಿದೆ . ಕೆಳಗಿನ ಪಿರಮಿಡ್ ನಲ್ಲಿ ಮಾಸಿಕ ಆದಾಯದ ಆಧಾರದ ಮೇಲೆ ಕರ್ನಾಟಕದ ಕುಟುಂಬಗಳ ಸ್ಥಿತಿ ನೋಡಬಹುದು.
ಮಾಸಿಕ ಆರ್ಥಿಕ ಆದಾಯ ಮಾತ್ರ "ಬಡತನದ ಸೂಚಕ" ಅಲ್ಲ ಅನ್ನುವುದನ್ನು ನೆನಪಿನಲ್ಲಿಡಬೇಕು. ಆದರೂ ಸುಮಾರು 69% ಗ್ರಾಮೀಣ ಕುಟುಂಬಗಳು ರೂ. 5,000 ಕ್ಕಿಂತ ಕಡಿಮೆ ಮಾಸಿಕ ಆದಾಯ ಹೊಂದಿವೆ ಎಂದರೆ, ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ. ರೂ. 5,000 ಕ್ಕಿಂತ ಕಡಿಮೆ ಮಾಸಿಕ ಆದಾಯ, ಕುಟುಂಬದಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ಸದಸ್ಯನದ್ದಾಗಿದ್ದರಿಂದ ಸಹಜವಾಗಿಯೇ ಉಳಿದ ಸದಸ್ಯರ ಆದಾಯ ಎಷ್ಟಿರಬಹುದು ಎಂಬ ಪ್ರಶ್ನೆ ಬರುತ್ತದೆ. ಈ ಸಮೀಕ್ಷೆಯಲ್ಲಿ ಆ ಪ್ರಶ್ನೆಯನ್ನು ಪ್ರಜ್ಞಾಪೂರ್ವಕವಾಗಿಯೇ ಕೈ ಬಿಟ್ಟಿದ್ದಾರೆ. ಮಾಸಿಕ ಆದಾಯ ಅಭದ್ರವಾಗಿರುವುದರಿಂದ, ಇತರ ಅನೇಕ ಸೂಚಕಗಳನ್ನು ಬಡತನದ ನಿರ್ಣಯ ಮಾಡಲು ಅಳವಡಿಸಿಕೊಂಡಿದ್ದಾರೆ ಎಂಬ ವಿವರಣೆ ನೀಡಿದ್ದಾರೆ.
5. ಕುಟುಂಬ ಆದಾಯದ ಪ್ರಮುಖ ಮೂಲ
ಒಟ್ಟಾರೆ ಭಾರತದಲ್ಲಿ 51.14% ಗ್ರಾಮೀಣ ಕುಟುಂಬಗಳು ದೈಹಿಕ ಕೂಲಿ ಕಾರ್ಮಿಕ ದುಡಿಮೆಯನ್ನು (Manual casual labor) ಅವಲಂಬಿಸಿದ್ದರೆ, ಕರ್ನಾಟಕದಲ್ಲಿ ಹೆಚ್ಚಿನ ಅಂದರೆ 44.65% ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. ಭಾರತದಲ್ಲಿ ಕೃಷಿಯನ್ನು ಅವಲಂಬಿಸಿದವರು ಈಗ ಕೇವಲ ಸುಮಾರು 30% ಕುಟುಂಬಗಳು ಮಾತ್ರ. ಭಾರತ "ಕೃಷಿ ಪ್ರಧಾನ ದೇಶ" ಎಂಬ ವ್ಯಾಖ್ಯಾನವನ್ನು ಬದಲಾಯಿಸುವ ಸಮಯ ಬಂದಿದೆ.
6. ಆಸ್ತಿ ಮಾಲಿಕತ್ವದ ವಿವರಗಳು
ಭಾರತದ 11.04% ಕುಟುಂಬಗಳು ರೆಫ್ರಿಜಿರೇಟರ್ ಹೊಂದಿವೆ ಮತ್ತು 20.69% ಕುಟುಂಬಗಳು, 2/3/4 ಚಕ್ರದ ವಾಹನಗಳು/ ಮೀನುಗಾರಿಕಾ ದೋಣಿ ಯನ್ನು ಹೊಂದಿವೆ. ಕರ್ನಾಟಕದಲ್ಲಿ ಈ ಸಂಖ್ಯೆಗಳು ಕ್ರಮವಾಗಿ 5.95% ಮತ್ತು 23.75% ಆಗಿವೆ.
ಸ್ಥಿರ ದೂರವಾಣಿ ಅಥವಾ ಮೊಬೈಲ್ ಫೋನ್ ಹೊಂದಿರುವ ಕುಟುಂಬಗಳು
|
||||
ಸ್ಥಿರ ದೂರವಾಣಿ ಮಾತ್ರ
|
ಮೊಬೈಲ್ ಫೋನ್ ಮಾತ್ರ
|
ಸ್ಥಿರ ದೂರವಾಣಿ ಮತ್ತು ಮೊಬೈಲ್ ಫೋನ್
|
ಯಾವುದೇ ದೂರವಾಣಿ ಇಲ್ಲ
|
|
ಭಾರತ
|
||||
ಕರ್ನಾಟಕ
|
ಕರ್ನಾಟಕದಲ್ಲಿ 80% ಕ್ಕೂ ಅಧಿಕ ಕುಟುಂಬಗಳು ಮೊಬೈಲ್ ಫೋನ್ ಹೊಂದಿವೆ! ಮೊಬೈಲ್ ಫೋನ್ ನ್ನು ಆಸ್ತಿ ಎಂದು ಪರಿಗಣಿಸದೆ ಇರುವುದೇ ಒಳಿತು. ಹೆಚ್ಚಿನ ಕುಟುಂಬಗಳಿಗೆ ಇದೊಂದು ಅವಶ್ಯಕತೆಯಾಗಿ ಪರಿಣಮಿಸಿದೆ.
7. ಭೂ ಮಾಲೀಕತ್ವದ ವಿವರಗಳು
ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಒಟ್ಟಾರೆ 3,45,79,432.78 ಎಕರೆ ಭೂಮಿ ಇದೆ. ಅದರಲ್ಲಿ ಸರಿಯಾಗಿ ಅರ್ಧದಷ್ಟು( 50%) ನೀರಾವರಿ ಭೂಮಿ. ಕುಟುಂಬಗಳ ಭೂ ಮಾಲೀಕತ್ವದ ಮಾಹಿತಿ ಕೆಳಗೆ ನೀಡಿದೆ.
ಕರ್ನಾಟಕದಲ್ಲಿ ಕೇವಲ 2.61% ಕುಟುಂಬಗಳು ಮಾತ್ರ ರೂ. 50,000 ಅಥವಾ ಅದಕ್ಕೂ ಮೇಲ್ಪಟ್ಟು ಸಾಲ ಮಿತಿ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ.
ಒಟ್ಟಾರೆಯಾಗಿ ಈ ಸಮೀಕ್ಷೆ ಸರ್ಕಾರಕ್ಕೆ ಸೂಕ್ತ ಕಾರ್ಯ ನೀತಿ ನಿರೂಪಿಸಲು ಸಹಾಯವಾಗುವುದರಲ್ಲಿ ಸಂದೇಹವಿಲ್ಲ.
--------------------------------------------------------------------------------------------------------------------------
Source for analysis: http://www.secc.gov.in/welcome
No comments:
Post a Comment